ಬೆಂಗಳೂರು: ರಾಜ್ಯದ ಲಕ್ಷಾಂತರ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಅನ್ನ ನೀಡುತ್ತಿರುವ ಈ ಪಡಿತರ ಚೀಟಿ ವ್ಯವಸ್ಥೆಯನ್ನ ಮತ್ತಷ್ಟು ಪಾರದರ್ಶಕಗೊಳಿಸಲು ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ, ಪಡಿತರ ಚೀಟಿ ಫಲಾನುಭವಿಗಳ ಇ-ಕೆವೈಸಿ ದೃಢೀಕರಣಕ್ಕೆ ನೀಡಲಾಗಿದ್ದ ಗಡುವನ್ನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಇದೀಗ ನವೆಂಬರ್ 10ರವರೆಗೆ ವಿಸ್ತರಿಸಿದೆ.