ಲಿಸ್ಬನ್: ವಿಪರೀತವಾಗಿ ಏರುತ್ತಿರುವ ಜೀವನ ವೆಚ್ಚ ಹಾಗೂ ದಿನೇದಿನೆ ಉಲ್ಬಣಿಸುತ್ತಿರುವ ವಸತಿ ಬಿಕ್ಕಟ್ಟನ್ನು ವಿರೋಧಿಸಿ, ಶನಿವಾರ ಪೋರ್ಚುಗಲ್‌ನ(Portugal) ರಾಜಧಾನಿ ಲಿಸ್ಬನ್‌ನಲ್ಲಿ(Lisbon) ಹತ್ತಾರು ಸಾವಿರ ಜನರು ಬೀದಿಗಿಳಿದು ಬೃಹತ್ ಪ್ರತಿಭಟನೆ(Protest) ನಡೆಸಿದ್ದಾರೆ.