ಕರಾವಳಿಯ ಮಣ್ಣಿನ ಸೊಗಡು… ತುಳುನಾಡಿನ ಸಂಸ್ಕೃತಿಯ ಹೆಮ್ಮೆ… ಕೆಸರು ಗದ್ದೆಯಲ್ಲಿ ಜೋಡಿ ಕೋಣಗಳ ಶರವೇಗದ ಓಟ… ಇದು ಕಂಬಳದ ವೈಭವ. ಕರಾವಳಿಯ ಗಡಿ ದಾಟಿ ಬೆಂಗಳೂರಿನಲ್ಲೂ ಜನಮೆಚ್ಚುಗೆ ಗಳಿಸಿರುವ ಕಂಬಳ (Kambala) ಕ್ರೀಡೆ, ಇದೀಗ ನಾಡಹಬ್ಬ ಮೈಸೂರು ದಸರಾ (Mysuru Dasara) ಅಂಗಳದಲ್ಲಿ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ.