ಮನೆ, ಅಡುಗೆಮನೆ, ಬಚ್ಚಲುಮನೆ ಅಥವಾ ಮನೆಯ ಅಂಗಳದಲ್ಲಿ ಹಾವು ಕಾಣಿಸಿಕೊಂಡರೆ ಸಹಜವಾಗಿಯೇ ಭಯವಾಗುತ್ತದೆ. ಹಾವು ವಿಷಕಾರಿಯೇ ಅಥವಾ ವಿಷಕಾರಿಯಲ್ಲವೇ ಎಂಬುದನ್ನು ತಿಳಿಯದೆ ಅದನ್ನು ಹಿಡಿಯಲು ಅಥವಾ ಓಡಿಸಲು ಪ್ರಯತ್ನಿಸುವುದು ಅಪಾಯಕಾರಿ.