ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ, ಎಸ್‌ಐಆರ್ ವಿರುದ್ಧ ಇಂಡಿ ಒಕ್ಕೂಟ ಕೈಗೊಂಡಿರೋ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಜ್ಞಾನೇಶ್‌ಕುಮಾರ್ ಪದಚ್ಯುತಿಗೆ ಬಿಗಿಪಟ್ಟು ಹಿಡಿದಿರೋ ಇಂಡಿ ಕೂಟ, ಇವತ್ತು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಮೂಲಕ ಕಾನೂನು ಸಮರಕ್ಕೆ ಮುಂದಾಗಿದೆ.