ಭಾರತೀಯ ಪೌರಾಣಿಕ ಕಥೆಗಳಿಗೆ ಇದುವರೆಗೆ ಯಾರೂ ಸರಿಯಾದ ನ್ಯಾಯ ಒದಗಿಸಿಲ್ಲ ಎಂದು ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹೇಶ್ ಬಾಬು ನಾಯಕತ್ವದ ಮುಂಬರುವ 'ವಾರಣಾಸಿ' ಚಿತ್ರದ ಮೂಲಕ ಮಹಾಕಾವ್ಯಗಳನ್ನು ಅತ್ಯಂತ ಭವ್ಯವಾಗಿ ಮತ್ತು ಹೊಸ ಅನುಭೂತಿಯೊಂದಿಗೆ ತೆರೆಮೇಲೆ ತರಲು ಅವರು ಸಿದ್ಧತೆ ನಡೆಸಿದ್ದಾರೆ.