ಬೆಂಗಳೂರು: ಕೆಪಿಎಸ್‌ಸಿ ನೇಮಕಾರಿ ಹಗರಣ (KPSC Scam) ಪ್ರಕರಣದಲ್ಲಿ ಕೆಎಎಸ್‌ ಅಭ್ಯರ್ಥಿ ಮಮಿತಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು 52ನೇ ಸೆಷನ್ಸ್ ಕೋರ್ಟ್‌ ವಜಾಗೊಳಿಸಿದೆ. ಅಭ್ಯರ್ಥಿ ಮಮಿತಾ ಕೆಎಎಸ್ ಪರೀಕ್ಷೆ ಬರೆದು ಸಂದರ್ಶನ ಎದುರಿಸಿದ್ದರು. ಸಂದರ್ಶನ ಬಳಿಕ ಅಭ್ಯರ್ಥಿಯನ್ನ ಕೆಪಿಎಸ್‌ಸಿ ಸದಸ್ಯೆ ಶಾಂತ ಹೊಸಮನಿ ಸಂಪರ್ಕ ಮಾಡಿದ್ದರು.