ಕರ್ನಾಟಕದ ಖಾಸಗಿ ಆಸ್ಪತ್ರೆಗಳಲ್ಲಿ ನವೆಂಬರ್ 1ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಚಿಕಿತ್ಸಾ ದರಪಟ್ಟಿ ಪ್ರದರ್ಶನ ಹಾಗೂ ಔಷಧಗಳ ಖರೀದಿ ಬೆಲೆ ಮತ್ತು MRP ಎರಡನ್ನೂ ಬಿಲ್‌ನಲ್ಲಿ ನಮೂದಿಸುವುದು ಕಡ್ಡಾಯವಾಗಿದೆ. ಆರೋಗ್ಯ ಇಲಾಖೆಯ ಈ ಕ್ರಮದಿಂದ ರೋಗಿಗಳಿಗೆ ಆಸ್ಪತ್ರೆ ವೆಚ್ಚ, ಔಷಧಗಳ ದರಗಳ ಬಗ್ಗೆ ಪಾರದರ್ಶಕ ಮಾಹಿತಿ ಲಭ್ಯವಾಗಲಿದೆ.