ನವದೆಹಲಿ: ಹಬ್ಬದ ವೇಳೆ ಆಹಾರ ಕಲಬೆರಕೆಗೆ ಬ್ರೇಕ್‌ ಹಾಕಲು ಕ್ರಮಕೈಗೊಳ್ಳುವಂತೆ ಎಲ್ಲಾ ರಾಜ್ಯಗಳಿಗೆ ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರ (FSSAI) ಸೂಚನೆ ನೀಡಿದೆ. ಆಹಾರ ಕಲಬೆರಕೆ ತಡೆಗಟ್ಟಲು ಎಫ್ಎಸ್ಎಸ್ಎಐ ಮುಂದಾಗಿದೆ. ಹಬ್ಬದ ವೇಳೆ, ಸಿಹಿತಿಂಡಿ, ಹಾಲಿನ ಉತ್ಪನ, ಪಾನೀಯ, ಖಾದ್ಯ ತೈಲ ಸೇರಿ ಹಲವು ಉತ್ಪನಗಳ ಮೇಲೆ ನಿಗಾ ವಹಿಸಲು ಸೂಚಿಸಿದೆ.