ಹಣದ ವಿಚಾರ ಮಾತನಾಡಲು ಹಿಂದೆ ಹಲವರು ಮುಜುಗರಪಡುತ್ತಿದ್ದರು. ಸ್ನೇಹಿತರ ಜೊತೆ ಪಾರ್ಟಿ, ದುಬಾರಿ ರೆಸ್ಟೋರೆಂಟ್‌ಗಳಲ್ಲಿ ಊಟ, ಪ್ರವಾಸ ಅಂತ ಬಂದಾಗ ಜೇಬಿನಲ್ಲಿ ಹಣ ಇಲ್ಲದಿದ್ದರೂ ಒತ್ತಡಕ್ಕೆ ಮಣಿದು ಖರ್ಚು ಮಾಡುವವರೇ ಹೆಚ್ಚು. ಆದರೆ ಈಗ ಕಾಲ ಬದಲಾಗಿದೆ. ಯುವ ಪೀಳಿಗೆಯ ಹೊಸ ಟ್ರೆಂಡ್​ ಶುರುವಾಗಿದೆ.