ಭಾರತೀಯ ಷೇರು ಮಾರುಕಟ್ಟೆಗೆ ಚೇತರಿಕೆ ನೀಡುವ ಉದ್ದೇಶದಿಂದ ಸೆಬಿ ಕೆಲ ಬದಲಾವಣೆಗಳನ್ನು ಪ್ರಸ್ತಾಪಿಸಿದೆ. ವಿದೇಶಿ ಹೂಡಿಕೆದಾರರಿಗೆ ದೀರ್ಘಕಾಲೀನ ಬಂಡವಾಳ ಲಾಭ ತೆರಿಗೆಯನ್ನು (LTCG) ತೆಗೆದುಹಾಕಬಹುದು ಎಂದು ಸರ್ಕಾರಕ್ಕೆ ಸೆಬಿ ಶಿಫಾರಸು ಮಾಡಿದೆ. ದೇಶೀಯ ಮ್ಯೂಚುವಲ್ ಫಂಡ್​ಗಳಿಗೂ ತೆರಿಗೆ ರಿಯಾಯಿತಿ ಒದಗಿಸಲು ಸೆಬಿ ಪ್ರಸ್ತಾಪಿಸಿದೆ.