ರಷ್ಯಾದಲ್ಲಿ ಉದ್ಯೋಗ ಮಾಡುತ್ತಿದ್ದಾಗ ಪರಿಚಯವಾದ ಬಿಹಾರದ ರಾಹುಲ್ ಯಾದವ್ ಮತ್ತು ಜೂಲಿ ಅವರ ಪ್ರೇಮಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಹುಲ್ ಭಾರತಕ್ಕೆ ಮರಳಿದ ಸುಮಾರು ಆರು ತಿಂಗಳ ಬಳಿಕ ಜೂಲಿ ತಮ್ಮ ಕುಟುಂಬದೊಂದಿಗೆ ಬಿಹಾರಕ್ಕೆ ಬಂದಿದ್ದಾರೆ. ಇವರ ಮದುವೆ ನವೆಂಬರ್ 2026ರಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.